Thursday, 19 November 2015


ಮುಂಚೆ ಹೀಗಿರಲಿಲ್ಲ ಪತ್ರಿಕೆಗಳೆಂದರೆ
ಗೌರವ ಇತ್ತು..
ನಂಬಿಕೆ ಇತ್ತು,
ಭರವಸೆ ಇತ್ತು.
ಜೊತೆಗೆ
ಹೆದರಿಕೆನೂ ಇತ್ತು.
ಇವತ್ತು ಏನಾಗಿದೆ ? ಈ ಪತ್ರಿಕೋ "ಉದ್ಯಮ"ಕ್ಕೆ ?

ಮೌಲ್ಯಗಳು ಹರಾಜ್....
ನೈತಿಕತೆ ಹರಾಜ್.............
ಬೋಳಿ......!!!! ಲೇ... ಏನೂ.... ಹುಷಾರ್....
ಈ ಮಾತುಗಳು ಚರ್ಚೆಗಳಲ್ಲಿ ಭಾಗವಹಿಸುವ ಅತಿಥಿಗಳಾದ್ರೆ...
ನಿರೂಪಕರೂ ಸಹ ಇದೇ ಭಾಷೆಯನ್ನೇ ಕಲಿತಿದ್ದಾರೆ.
ಊರ ಕಾಯೋ ದೊರೆಯೇ ಕಳ್ಳನಾದ್ರೆ... ಊರಿನ ಗತಿ....ದೇವರೇ ಗತಿ.....
* ಹುಚ್ಚ ವೆಂಕಟ್ ಮಾನಸಿಕವಾಗಿ ನೊಂದಿದ್ದಾರೆ. ಅವರನ್ನು ಬಳಸಿಕೊಳ್ಳಲಾಗುತ್ತಿದೆ.
ಆತನಿಗೆ ಕೌನ್ಸಿಲಿಂಗ್ ಕೊಡಿಸುವ ಕೆಲಸ ಮಾಢುತ್ತಿಲ್ಲ.
ಪೈಪೋಟಿಗೆ ಬಿದ್ದ ಹಾಗೆ, ಬಿಸಿ ಬಿಸಿ ಸುದ್ದಿ... ಹುಚ್ಚ ವೆಂಕಟ್ ಫೇವರೇಟ್.....
* TRP ಗಾಗಿ ಒಬ್ಬ ಹುಚ್ಚ ವೆಂಕಟನ ಹುಚ್ಚು ಜಾಸ್ತಿ ಮಾಡಿ, ಮಾತಿನೊಳಗೆ ವಿವಾದಗಳನ್ನು ಸೃಷ್ಟಿ ಮಾಢಿಸಿ, ಟಿವಿ ನೋಡುವವರನ್ನೂ "ಹುಚ್ಚ"ರನ್ನಾಗಿಸಿ ಪತ್ರಿಕೋದ್ಯಮದ ಮೌಲ್ಯಗಳನ್ನೇ ಹರಾಜಿಗಿಟ್ಟಿದ್ದಾರೆ.
ಈ ಹಂತಕ್ಕೆ ತಲುಪಿದೆ ಪತ್ರಿಕೋದ್ಯಮ...
ಭಾರತವನ್ನು ದೇವರೇ ಕಾಪಾಡಬೇಕು. ಇವರಿಗೆ ಹೆದರಿಕೊಂಡೇ ದೇವರು ಭೂ ಲೋಕದತ್ತ ಸುಳಿಯುತ್ತಿಲ್ಲವೇನೋ !!!!!
ಹಿರಿಯ ಪತ್ರಕರ್ತರೆನ್ನಿಸಿಕೊಂಡಿರುವ ಹೆಚ್. ಆರ್. ರಂಗನಾಥರೂ ಈ ಹಂತಕ್ಕೆ ಇಳಿದುಬಿಟ್ರಾ ?
- ರಾಜು ಮೌರ್ಯ ದಾವಣಗೆರೆ

No comments:

Post a Comment