Thursday, 19 November 2015

ವಿಶ್ವಗುರು - ಸ್ವಾಮಿ ವಿವೇಕಾನಂದರು





ಜನರು ಜೀವಿಸಲಿಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ತಿರುಚಬಲ್ಲರು. ಹೊಸತನ್ನು ಸೃಷ್ಟಿಸಬಲ್ಲರು. ಕಾಲಕ್ಕೆ ತಕ್ಕಂತೆ ಮಾತುಗಳನ್ನೂ ಹೊರಳಿಸಬಲ್ಲರು. ಅಮಾಯಕ ಜನರಿಗೆ ಮಂಕುಬೂದಿ ಎರಚಬಲ್ಲರು. 

ಭೂತಕಾಲಕ್ಕಿಂತಲೂ ವರ್ತಮಾನದಲ್ಲೂ ಎಲ್ಲದ್ದಕ್ಕೂ ಮೀರಿಸುವ ಜನರು ಜೀವಿಸುತ್ತಿದ್ದಾರೆ. 
ಇನ್ನು ಸ್ವಾಮಿ ವಿವೇಕಾನಂದರನ್ನು ಬಿಟ್ಟಾರೆಯೇ ? 

 ಆ ಮಹಾನ್ ವ್ಯಕ್ತಿ ಸ್ವಾಮೀಜೀಯವರ ತತ್ವಗಳನ್ನು ಭಾರತೀಯರೆಲ್ಲರಿಗೂ ತಲುಪಿಸಿಬಿಟ್ಟಿದ್ದಿದ್ದರೆ, ಮನುಷ್ಯನಲ್ಲಿಡಗಿರುವ ಸ್ವಾರ್ಥ, ದ್ವೇಷ, ಅಸೂಯೆ ಇವುಗಳಿಲ್ಲದೇ ಭಾರತ ಪ್ರಶಾಂತವಾಗಿರುತ್ತಿತ್ತು. 

ಇವತ್ತಿಗೂ ಸ್ವಾಮಿ ವಿವೇಕಾನಂದರುನ್ನು ಕೆಲವೇ ವರ್ಗಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಅದ್ಯಾಕೋ ಗೊತ್ತೇ ಆಗುತ್ತಿಲ್ಲ. ಸ್ವಾಮಿಜೀಯವರ ಪರಿಚಯ, ತತ್ವಗಳನ್ನು ಶೋಷಿತರಿಗೆ ತಿಳಿಸುವ ಪ್ರಯತ್ನವೇ ಮಾಡುತ್ತಿಲ್ಲ. ದುರಾದೃಷ್ಟವೆಂದರೆ. ಸ್ವಾಮಿ ವಿವೇಕಾನಂದರನ್ನು ಒಂದು ರಾಜಕೀಯದ ಪರವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಬೇರೆ ರಾಜಕೀಯ ಪಕ್ಷಗಳಲ್ಲಿರುವ ಹಿಂದುಗಳನ್ನು ಸ್ವಾಮೀಜಿಯವರಿಂದ ದೂರ ಇಡುವ ಪ್ರಯತ್ನಗಳು ಸಫಲವಾಗುತ್ತಿವೆ. 

ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗುತ್ತಿದೆ. ಭಾರತೀಯ ಜನತಾ ಪಕ್ಷ ಬಿಟ್ಟು, ಬೇರೆ ಪಕ್ಷಗಳು ಸ್ವಾಮಿ ವಿವೇಕಾನಂದರನ್ನು ಸ್ಮರಿಸಿಕೊಳ್ಳುತ್ತಿವೆಯೇ ? ಸ್ವಾಮೀಜಿಯವರ ಜಯಂತಿಗಳನ್ನು ಆಚರಿಸುತ್ತಿವೆಯೇ ? ಮಹಾತ್ಮಾ ಗಾಂಧೀಜೀ, ನೇತಾಜೀ ಸುಭಾಷಚಂದ್ರಭೋಸ್, ಲಾಲ ಬಹದ್ದೂರ್ ಶಾಸ್ತ್ರಿ, ಸೇರಿದಂತೆ ಎಲ್ಲಾ ಮಹಾನ್ ಪುರುಷರ ಸ್ಮರಣೆ ಮತ್ತು ಜಯಂತಿಗಳನ್ನು ಎಲ್ಲ ರಾಜಕೀಯ ಪಕ್ಷಗಳು ಮಾಢುತ್ತಿವೆ ಆದರೆ ಸ್ವಾಮಿ ವಿವೇಕಾನಂದರನ್ನು ಮಾತ್ರ ಭಾರತೀಯ ಜನತಾ ಪಕ್ಷಕ್ಕೆ ಸೀಮಿತ ಗೊಳಿಸುತ್ತಿರುವುದು ದುರಾದೃಷ್ಟಕರವೇ ಸರಿ.

 * ಸ್ವಾಮಿ ವಿವಾಕಾನಂದರು ತಮ್ಮ ಜೀವಿತಾವಧಿಯಲ್ಲಿ, ಭೇದಭಾವ ಮಾಡಿಲ್ಲ. ಹಿಂದು ಧರ್ಮವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದ ಮಹಾತ್ಮ. ಆ ಮಹಾತ್ಮ ಭಾರತೀಯರ ಆಸ್ತಿ. ಅವರ ತತ್ವಗಳು ಭಾರತೀಯರೆಲ್ಲರೂ ತಲುಪಬೇಕು. (ಸ್ವಾಮೀಜೀಯ ಅನುಯಾಯಿಗಳು ಎಂದು ಘೋಷಷಿಕೊಂಡಿರುವ ಕೆಲವರು ಸ್ವಾಮೀಜೀ ತತ್ವಗಳನ್ನು ತಲುಪಿಸುವ ಪರಿ ಹೇಗಿದೆ ಎಂದರೆ, ಸ್ವಾಮೀಜೀಯವರ ಜಯಂತಿಯಂದು, ಸ್ವಾಮೀ ವಿವೇಕಾನಂದರ ಬಗ್ಗೆ ತಿಳಿದಿರುವವರ ಮುಂದೆಯೇ ತತ್ವಗಳ ಬಗ್ಗೆ ಭಾಷಣಗಳ ರೂಪದಲ್ಲಿ ಹೆಳಲಾಗುತ್ತಿದೆ.) 

ಸ್ವಾಮೀಜೀಯವರ ಬಗ್ಗೆ ತಿಳಿಯದವರ ಬಳಿ ಹೋಗಿ ಅಂತಹವರಿಗೆ ತಿಳಿಸಿದರೆ, ತತ್ವಗಳನ್ನು ಕೆಲವರಾದ್ರೂ ಅಳವಡಿಸಿಕೊಂಡರೂ ಸ್ವಾಮೀಜೀಗೆ ಗೌರವ ನೀಡಿದಂತಾಗುತ್ತದೆ. ಈ ಕಾರ್ಯ ಆಗಬಹುದೇ... .... 

ಯಾರೋ ಕೆಲವರು ಸ್ವಾಮೀಜೀಯವರ ಬಗ್ಗೆ ಅವರ ಆಹಾರ ಪದ್ಧತಿಯ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಹೌದು. ಯಾಕೆ ಹೇಳಿ ? ಸ್ವಾಮಿ ವಿವೇಕಾನಂದರನ್ನು ಹಿಂದೂಸ್ಥಾನದ ಆಸ್ತಿಯನ್ನಾಗಿ ಮಾಡಲೇ ಇಲ್ಲ . ಸ್ವಾಮೀಜೀಯವರು ಅವರ ತತ್ವಗಳು ಒಂದು ನೂರ ಇಪ್ಪತ್ತು ಕೋಟಿ ಭಾರತೀಯರಿಗೂ ತಲುಪಬೇಕು. ಆದರೆ ನಾವೇನು ಮಾಡುತ್ತಿದ್ದೇವೆ. 

ಮಹಾತ್ಮನನ್ನು ಒಂದು ರಾಜಕೀಯ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತಿದ್ದೇವೆ. ನಮಗೇ ಸೀಮಿತ ಎಂದು ಅಧಿಕಾರಯುತವಾಗಿ ಸಮರ್ಥಿಸಿಕೊಳ೵ಳುತ್ತಿದ್ದೇವೆ. 

ಸ್ವಾಮೀಜೀಯವರನ್ನು ಟೀಕಿಸುವವರಿಗೆ ನಿಜವಾಗಿಯೂ ಸ್ವಾಮೀಜೀಯವರ ಮೇಲೆ ಕೋಪವಿರುವುದಿಲ್ಲ. ಒಳ್ಳೇಯ ತತ್ವಗಳನ್ನು ಯಾರೂ ಬೇಕಾದರೂ ಸ್ವೀಕರಿಸುತ್ತಾರೆ. ಅವರ ವಿರೋಧ ೊಂದು ರಾಜಕೀಯ ಪಕ್ಷದ ವಿರುದ್ಧ ಆ ರಾಜಕೀಯ ಪಕ್ಷದ ಪರ ಪ್ರಚಾರಕಾಗಿ, ವಕ್ತಾರಾಗಿರುವವರ ವಿರುದ್ಧ ಈ ಸ್ವಾರ್ಥ ರಾಜಕೀಯದಾಟಗಳಿಗೆ ನಿಷ್ಕಲ್ಮಶ ಸ್ವಾಮಿ ವಿವೇಕಾನಂದರು ಬ:ಳಕೆಯಾಗುತ್ತಿದ್ದಾರೆ. 

--ಸ್ವಲ್ಪ ಯೋಚಿಸಿ ನೋಡಿ, ಎಲ್ಲರಿಗೂ ಸಲ್ಲಬೇಕಾದ ಮಹಾನ್ ಪುರುಷರನ್ನು ಕೆಲವೇ ವರ್ಗಗಳಿಗೆ, ಒಂದು ಪಕ್ಷಕ್ಕೆ ಸೀಮೀತ ಗೊಳಿಸುತ್ತಿಲ್ಲವೇ ? ಸ್ವಾಮೀಜೀಯವರ ಭಾಷಣಕ್ಕೆ ಅಮೇರಿಕಾದ ಜನರೇ ತಲೆಬಾಗಿರುವಾಗ, ಅವರ ತತ್ವಗಳನ್ನು ನಮ್ಮ ಭಾರತ ದೇಶದಲ್ಲಿಯೇ ನಮ್ಮೊಟ್ಟಿಗೇ ಜೀವಿಸುತ್ತಿರುವ ಇತರರಿಗೂ ತಲುಪಿಸುವುದು ಅಸಾಧ್ಯವೇ ? 

ಸ್ವಾಮೀಜೀಯವರು ಎಲ್ಲೂ ಯಾವತ್ತೂ ಹೇಳಿಲ್ಲ. ಭೇದ - ಭಾವ ಮಾಡು, ಇತರರನ್ನು ದ್ವೇಷಿಸು, ಮುಂದಿನ ದಿನಗಳಲ್ಲಿ ನನ್ನ ಹೆಸರನ್ನು, ಸ್ವಹಿತಕ್ಕೆ ಬಳಸಿಕೊಳ್ಳಿ ಎಂಬ ಮಾತನ್ನು. ಆದರೂ ನಮಗೆ ಅದರ ಬಗ್ಗೆ ಚಿಂತೆ ಇಲ್ಲ. "ನಾನು" ಅಷ್ಟೆ. 

ಸ್ವಾಮೀಜೀಯವರ ಮಾತುಗಳು ಸೋತವನಿಗೆ ಆತ್ಮಸ್ಥೈರ್ಯ ತುಂಬುತ್ತೆ. ಬಿದ್ದವನಿಗೆ ಎದ್ದು ಓಡುವ ಚೈತನ್ಯ ನೀಡುತ್ತೆ. ಬರಡಾದ ಬಾಳಿಗೆ ಬೆಳಕು ತುಂಬುತ್ತೆ. ಇಂತಹ ವ್ಯಕ್ತಿಯನ್ನು ನಾವು ನಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದೇವೆ ಅನ್ನಿಸುತ್ತಿಲ್ಲವೇ ?

 ಮನುಷ್ಯನಲ್ಲಿರ ಬೇಕಾದ ದಯೆ, ವಿಶ್ವಾಸ, ನಂಬಿಕೆ, ನ್ಯಾಯ, ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ದಿನಗಳಲ್ಲಿ, ವಿಶ್ವಕ್ಕೆ ಶಾಂತಿಧೂತರಾದ ಸ್ವಾಮೀಜೀಯವರ ಅನುಯಾಯಿಗಳೆನ್ನಿಸಿಕೊಂಡವರು, ಜೀವನವನ್ನು ಅರ್ಪಣೆ ಮಾಡಿಕೊಂಡವರು, ಅವರನ್ನು ಒಂದೇ ಕಡೆ, ಕೆಲವೇ ವರ್ಗಗಳಿಗೆ ಸೀಮಿತಗೊಳಿಸದೇ, ಸ್ವಾರ್ಥ ರಾಜಕಾರಣದ ಕೆಸರಿನಲ್ಲಿರುವ ಸ್ವಾಮೀಜೀಯವರ ಹೆಸರನ್ನು ಹೊರ ತಂದು ಭಾರತೀಯರೆಲ್ಲರ ಮನಸ್ಸಿನಲ್ಲಿ ಅವರೂ ಹಾಗೂ ಅವರ ತತ್ವಗಳು ನೆಲೆಸುವಂತೆ ಮಾಡುವ ಕಡೆ ಹೆಚ್ಚು ಗಮನ ಹರಿಸಲಿ. ಎಂದು ವಿಶ್ವಾಸಪೂರ್ವಕವಾಗಿ ಕೈ ಮುಗಿದು ವಿನಂತಿಸಿಕೊಳ್ಳೋಣ. 

- ರಾಜು ಮೌರ್ಯ ದಾವಣಗೆರೆ.

No comments:

Post a Comment